Feedback / Suggestions

ದಿನಾಂಕ 11.10.2022 ರಂದು ಮಧ್ಯಾಹ್ನ 3.00 ಗಂಟೆಗೆ ಫಿಯರ್ಾದಿದಾರರಾದ ಶ್ರೀ ವೆಂಕಟೇಶ್ವರಲು ತಂದೆ ಪೆದ್ದ ಬ್ರಮ್ಮಯ್ಯ ರೌತು ವಯಾ-27  ವರ್ಷ ಸಾ:ಚಿಲಕಚೆಲರ್ಾ, ದೋರನಾಲ್ ಮಂಡಲಂ ತಾ: ಯರಗುಂಡಾಪಾಲಂ ಜಿ:ಪ್ರಕಾಶಂ (ಆಂದ್ರಪ್ರದೇಶ) ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನಂದರೆ, ದಿನಾಂಕ 10.10.2022 ರಂದು ರಾತ್ರಿ 10.45 ಗಂಟೆಯ ಸುಮಾರಿಗೆ ರಾಯಚೂರ ನಗರದ ಗದ್ವಾಲ್ ರಸ್ತೆಯ ಸಾವಿತ್ರಿಬಾಯಿ ರೈಸ್ಮಿಲ್ ಹತ್ತಿರ ರಾಯಚೂರುದಿಂದ ತಮ್ಮ ಸ್ವಂತ ಊರು ಕಡೆಗೆ ವಾಹನ ನಂ. ಎಪಿ-39/ಟಿಕ್ಯೂ-5228 ರಲ್ಲಿ ತಾನು ಮತ್ತು ಕಾಶಿರಾಮಲು ಚಾಲಕನೊಂದಿಗೆ ಹೋಗುತ್ತಿರುವಾಗ ಸುಮಾರು 28-30 ವಯಸ್ಸಿನ ಒಬ್ಬ ಮತ್ತು 40-45 ವಯಸ್ಸಿನ ಇನ್ನೊಬ್ಬ ವ್ಯಕ್ತಿಯು ಕಪ್ಪು ಬಣ್ಣದ ಯುನಿಕಾನರ್್ ಮೊಟಾರ್ ಸೈಕಲ್ ಮೇಲೆ ಬಂದು ಕೈ ಮಾಡಿ ತಮ್ಮ ವಾಹನವನ್ನು ನಿಲ್ಲಿಸಿ ನಾವು ಪೊಲೀಸರು ನಿಮ್ಮ ವಾಹನ ಪರಿಶೀಲನೆ ಮಾಡುತ್ತೇವೆ ಎಂದು ನೀವು ಯಾವುದೇ ದಾಖಲಾತಿಗಳು ಇಲ್ಲದೇ ಹಣ ಸಾಗಿಸುತ್ತಿದ್ದು ನಿಮ್ಮನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಅಂತಾ ಫಿರ್ಯದಿದಾರನಿಗೆ ಹಾಗೂ ಕಾಶಿರಾಮಲು ರವರಿಗೆ ಹೆದರಿಸಿ ಬೆದರಿಸಿ ಫಿಯರ್ಾದಿದಾರರಲ್ಲಿದ್ದ ಹತ್ತಿ ಮಾರಾಟ ಮಾಡಿದ ಒಟ್ಟು ಹಣ ರೂ. 4.91.000/-ಗಳನ್ನು ಮತ್ತು ಎರಡು ಮೋಬೈಲ್ ಫೋನುಗಳು ಅ.ಕಿ.ರೂ.1000/-ನೇದ್ದವುಗಳನ್ನು ಸ್ವೀಚ್ ಆಫ್ ಮಾಡಿಸಿ ಕಿತ್ತಿಕೊಂಡು ನಮ್ಮ ಹಿಂದೆ ಪೊಲೀಸ್ ಠಾಣೆಗೆ ಬನ್ನಿ ಅಂತ  ಹೇಳುತ್ತಾ ತಮ್ಮ ಮೋಟಾರ್ ಸೈಕಲ್ಗಳನ್ನು ವೇಗವಾಗಿ ಚಲಾಯಿಸಿಕೊಂಡು  ಫಿಯರ್ಾದಿದಾರರ ಕಣ್ಣು ತಪ್ಪಿಸಿ ಹೊರಟು ಹೋಗಿರುತ್ತಾರೆಂದು ನೀಡಿದ ಫಿಯರ್ಾದಿಯ ಸಾರಂಶದ ಮೇಲಿಂದ ಮಾಕರ್ೇಟ್ಯಾಡರ್್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 90/2022 ಕಲಂ:384 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

 

        ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆಮಾಡಲು ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರ ಮಾರ್ಗದರ್ಶನದಲ್ಲಿ ಶ್ರೀ ವೆಂಕಟೇಶ ಪೋಲಿಸ್ ಉಪಾಧೀಕ್ಷಕರು, ರಾಯಚೂರು, ಹೆಚ್.ಆರ್.ಪಾಟೀಲ್, ಸಿ.ಪಿ.ಐ., ಪಶ್ಚಿಮ ವೃತ್ತ ರವರ ನೇತೃತ್ವದಲ್ಲಿ ಶ್ರೀ ವಿಜಯಪ್ರಕಾಶ ಪಿ.ಎಸ್.ಐ., ಮಾಕರ್ೇಟ್ಯಾರ್ಡ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿದ್ದು ಇರುತ್ತದೆ.

      

        ಸದರಿ ವಿಶೇಷ ತಂಡವು ದಿನಾಂಕ 18.10.2022 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ         1) ಶ್ರೀಕಾಂತ ಕೆ.@ ಶ್ರೀ ತಂದೆ ನರಸಿಂಹಲು ಕೆ.@ ಮೇಸ್ತ್ರಿ ನರಸಿಂಹಲು ವಯಾ-34 ವರ್ಷ, ಸಾ: ದೇವಿನಗರ ರಾಯಚೂರು 2) ಸಿ.ನರೇಂದ್ರ ಕುಮಾರ @ ಕುಮಾರ್ ತಂದೆ ನರಸಿಂಹಲು ವಯಾ-27 ವರ್ಷ ಸಾ; ಗದ್ವಾಲ್ ರೋಡ್ . ರಾಯಚೂರು ಇವರನ್ನು ಪತ್ತೆ ಹಚ್ಚಿ ಆರೋಪಿತರಿಂದ ಒಟ್ಟು ನಗದು ಹಣ 4,65.000/- ರೂ.ಗಳನ್ನು ಜಪ್ತಿಮಾಡಿಕೊಂಡು ಯಶಸ್ವಿಯಾಗಿದ್ದು ಈ ತಂಡದಲ್ಲಿ ಪತ್ತೆಕಾಯರ್ಾ ಮಾಡಿದ ಶ್ರೀ ವಿಜಯಪ್ರಕಾಶ ಪಿ.ಎಸ್.ಐ., ಮಾಕರ್ೇಟಯಾರ್ಡ, ಬಸೀರ್ ಅಹ್ಮದ್ ಎ.ಎಸ್.ಐ., ಮಹ್ಮದ್ ರಫಿ ಹೆಚ್.ಸಿ.,ಅಮರೇಶ ಹೆಚ್.ಸಿ., ಶಿವಮೂತರ್ಿ ಹೆಚ್.ಸಿ., ಚನ್ನಪ್ಪ ಹೆಚ್.ಸಿ., ಗೌಸಪಾಷಾ ಹೆಚ್.ಸಿ., ಶ್ರೀನಿವಾಸ ಹೆಚ್.ಸಿ.,ಅಶೋಕ ಹೆಚ್.ಸಿ., ಎಂ.ಡಿ. ಮಹ್ಮದ್ ಜಾಫರ್ ಸಾದಿಕ್ ಹೆಚ್.ಸಿ.,ನಿಸಾರ್ ಹೆಚ್.ಸಿ., ಅಜೀಮ್ ಪಾಷಾ ಎ.ಹೆಚ್.ಸಿ. ರವರುಗಳು ಆರೋಪಿತರ ಪತ್ತೆ ಕಾರ್ಯದಲ್ಲಿ ಶ್ರಮಿಸಿದ್ದು, ಸದರಿ ಪತ್ತೆ ಕಾಯರ್ಾವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರು ಶ್ಲಾಘಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ನಗದು ಬಹುಮಾನ ಘೋಷಣೆ ಮಾಡಿದ್ದು ಇರುತ್ತದೆ.

Last Updated: 10-12-2022 01:04 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Raichur District Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080