ಅಭಿಪ್ರಾಯ / ಸಲಹೆಗಳು

ರಾಯಚೂರು ಜಿಲ್ಲೆಯಲ್ಲಿ ಮಟಕಾ ಜೂಜಾಟದಲ್ಲಿ ನಿರತವಾಗಿದ್ದ ರೂಢಿಗತ (ಚಾಳಿಬಿದ್ದ) 6 ಜನ  ಜೂಜುಕೋರರನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ರಾಯಚೂರು ಜಿಲ್ಲೆ ರವರ ಮನವಿಯ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು, ರಾಯಚೂರು ಜಿಲ್ಲೆ ರವರು ಪ್ರತಿಯೊಬ್ಬರಿಗೆ 6 ತಿಂಗಳುಗಳ ಕಾಲ ಗಡಿಪಾರು ಶಿಕ್ಷೆ ವಿಧಿಸಿ ದಿನಾಂಕ: 02.09.2022 ???? ಆದೇಶ ಮಾಡಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು, ರಾಯಚೂರು ಜಿಲ್ಲೆ ರವರ ಆದೇಶದಂತೆ ಗಡಿಪಾರು ಶಿಕ್ಷೆಗೊಳಗಾದ 1) ಶ್ರೀ ಶಕೀಲ್ ಶೇಖ್ ತಂದೆ ಮಹೆಬೂಬ ಶೇಖ್ ವ: 32 ವರ್ಷ ಉ: ಚಿಕನ್ ವ್ಯಾಪಾರ (ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿ) 2) ಉಮಾಪತಿ ತಂದೆ ಶೇಖರಪ್ಪ ಬಸರಿಮರದ ವ: 35 ವರ್ಷ ಉ: ಹೋಟಲ್ ಕೆಲಸ ಸಾ: ಚಿಂಚರಗಿ (ಸಿರವಾರ ಪೊಲೀಸ್ ಠಾಣೆಯ ವ್ಯಾಪ್ತಿ) 3) ಕಾಸೀನ್ ಸತ್ಯನಾರಾಯಣ ತಂದೆ ಪೋತರಾಜು ವ: 65 ವರ್ಷ ಉ: ಹೋಟಲ್ ಕೆಲಸ ಸಾ: ಗಾಂಧಿನಗರ (ತುರುವಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿ) 4) ಹನುಮಂತ ತಂದೆ ಯಂಕಪ್ಪ ಕನಸಾವಿ ವ: 28 ವರ್ಷ ಉ: ಒಕ್ಕಲುತನ ಸಾ: ಜಂಬುನಾತನ ಹಳ್ಳಿ (ತುರುವಿಹಾಳ ಪೊಲೀಸ್ ಠಾಣೆ ವ್ಯಾಪ್ತಿ) 5) ದೇವಪ್ಪ ತಂದೆ ನಾಗಪ್ಪ ಹೊಸಮನಿ ವ: 47 ವರ್ಷ ಉ: ಮಟಕ ಬರೆಯುವುದು ಸಾ: ಬಿ.ಗಣೇಕಲ್ (ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ) 6) ಗ್ಯಾನನಗೌಡ ತಂದೆ ಗದ್ದೆನಗೌಡ ವ: 40 ವರ್ಷ ಉ: ಒಕ್ಕಲುತನ ಸಾ: ಈಚನಾಳ (ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿ) ಇವರುಗಳಿಗೆ ಗಡಿಪಾರು ಮಾಡಲು ಸಂಬಂಧಪಟ್ಟ ಠಾಣೆಗಳ ಪಿ.ಎಸ್.ಐ/ಪಿ.ಐ ರವರಿಗೆ ಆದೇಶಿಸಿ ಸದರಿ ವ್ಯಕ್ತಿಗಳ ಬಗ್ಗೆ ನಿಗಾವಹಿಸಿ ಅವರುಗಳು ಗಡಿಪಾರು ಆದೇಶವನ್ನು ಉಲ್ಲಂಘಿಸಿ ಮರಳಿ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವೇಶಿಸಿದಲ್ಲಿ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಇರುತ್ತದೆ.

                   ಸಾಮಾಜಿಕ ಪಿಡುಗಾದ ಮಟಕಾ ಜೂಜಾಟ ಹಾಗೂ ಇಸ್ಪೀಟ್ ಜೂಜಾಟಗಳ ವಿರುದ್ದ ರಾಯಚೂರು ಜಿಲ್ಲಾ ಪೊಲೀಸ್ ನಿರಂತರ  ಕಠಿಣ ಕ್ರಮ ಕೈಗೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಿದೆ.

ಇತ್ತೀಚಿನ ನವೀಕರಣ​ : 10-09-2022 08:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಯಚೂರು ಜಿಲ್ಲಾ ಪೊಲೀಸ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080