ಅಭಿಪ್ರಾಯ / ಸಲಹೆಗಳು

ಜಿಲ್ಲೆಯಲ್ಲಿ ಬೆಳೆದ ವಿವಿಧ ಬೆಳೆಗಳನ್ನು ಕಟಾವು ಮಾಡಿ ಮನೆ/ಮಾರುಕಟ್ಟೆಗಳಿಗೆ ಸಾಗಿಸುವ ಸುಗ್ಗಿಯ ಸಮಯವಾಗಿರುತ್ತದೆ. ಕಟಾವು ಮಾಡಿದ ಭತ್ತ/ಭತ್ತದ ಹುಲ್ಲು/ಹತ್ತಿಯನ್ನು ರೈತರು ಹೊಲಗಳಿಂದ ಮನೆಗೆ, ಮಾರುಕಟ್ಟೆಗೆ ಟ್ರ್ಯಾಕ್ಟರ್/ಲಾರಿ/ಟಾಟಾ  ಏಸ್ ಗೂಡ್ಸ್ ವಾಹಗಳಲ್ಲಿ ಸಾಗಿಸುವಾಗ  ಮಿತಿ ಮೀರಿದ ಎತ್ತರ (Over Height) ಹಾಗೂ ಮಿತಿ ಮೀರಿದ ಅಗಲ (Over Width) ಮಾಡಿ ಸಾಗಿಸುತ್ತಿದ್ದು ಇದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತಿವೆ.

                 ಮಿತಿ ಮೀರಿದ ಎತ್ತರ (Over Height) ಮಾಡಿ ವಾಹನಗಳಲ್ಲಿ ಭತ್ತದ ಹುಲ್ಲು, ಜೋಳದ ಸೊಪ್ಪೆ, ಹತ್ತಿ, ಕಬ್ಬು, ಭತ್ತ ಇತ್ಯಾದಿ ಸಾಗಿಸುವುದರಿಂದ ವಿದ್ಯುತ್ ತಂತಿಗಳಿಗೆ ತಗುಲಿ ಅಥವಾ ನಿಯಂತ್ರಣ ತಪ್ಪಿ ಅಪಘಾತಗಳಾಗುವ ಸಂಭವ ಇರುತ್ತವೆ. ಮಿತಿ ಮೀರಿದ ಅಗಲ (Over Width) ವಾಗಿ ಹತ್ತಿ, ನೆಲ್ಲು, ಜೋಳ, ಕಬ್ಬು, ಲೋಡ್ ಮಾಡಿ ರಸ್ತೆಯಲ್ಲಿ ಸಾಗಿಸುವುದರಿಂದ ಎದುರಿಗೆ/ಹಿಂದಿನಿಂದ ಬರುವ ವಾಹನಗಳಿಗೆ ರಸ್ತೆ ಕಾಣದೇ ಅಪಘಾತಗಳು ಆಗುವ ಸಂಭವ ಇರುತ್ತವೆ.

                ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಹಾಗೂ ವಾಹನ ಮಾಲಿಕರಲ್ಲಿ ಕೋರುವುದೇನಂದರೆ, ಮಿತಿ ಮೀರಿದ ಎತ್ತರ (Over Height) ಮಾಡಿ,  ಮಿತಿ ಮೀರಿದ ಅಗಲ (Over Width) ವಾಗಿ ಕೃಷಿ ಉತ್ಪನ್ನಗಳನ್ನು ಸಾಗಿಸದೇ  ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲು ಕೋರಿದೆ.

ಮಿತಿ ಮೀರಿದ ಎತ್ತರ (Over Height) ಮಾಡಿ,  ಮಿತಿ ಮೀರಿದ ಅಗಲ (Over Width) ವಾಗಿ ಕೃಷಿ ಉತ್ಪನ್ನಗಳನ್ನು ಸಾಗಿಸದೇ  ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿ ಸಲು ಸೂಚನೆ.

ಇತ್ತೀಚಿನ ನವೀಕರಣ​ : 10-12-2022 12:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಯಚೂರು ಜಿಲ್ಲಾ ಪೊಲೀಸ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080