ಅಭಿಪ್ರಾಯ / ಸಲಹೆಗಳು

ಚಿನ್ನಾಭರಣಗಳ ಕಳ್ಳತನ ಮಾಡಿದ ಆರೋಪಿ ಬಂಧನ-60 ಗ್ರಾಂ ಬಂಗಾರ (ಅ.ಕಿ-3 ಲಕ್ಷ) ಜಪ್ತಿ

 

    ದಿನಾಂಕ: 29.01.2022 ರಂದು ಪಿಯರ್ಾದಿ ಶ್ರೀಮತಿ ಲಕ್ಷ್ಮಿ ಗಂಡ ಈರಣ್ಣ ಸಾ:ತಿಮ್ಮಾಪೂರ ಪೇಟೆ ರಾಯಚೂರು ರವರು ತಮ್ಮ ಮನೆಯ ಬೀಗ ಮುರಿದು ಚಿನ್ನಾಭರಣ ಕಳುವು ಮಾಡಿದ ಬಗ್ಗೆ ನೀಡಿದ ದೂರಿನ ಆಧಾರದ ಮೇಲೆ ನೇತಾಜಿ ನಗರ ಪೊಲೀಸ್ ಠಾಣೆಯ ಗುನ್ನೆ ನಂ:08/2022 ಕಲಂ:457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಸದರಿ ಪ್ರಕರಣದಲ್ಲಿ ಕಳುವು ಮಾಡಿದ ಆರೋಪಿ ಮತ್ತು ಮಾಲು ಪತ್ತೆ ಕುರಿತು ಶ್ರೀ ನಿಖಿಲ್.ಬಿ. ಕಖ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಶ್ರೀ ವೆಂಕಟೇಶ ಹೊಗಿಬಂಡಿ ಪೊಲೀಸ್ ಉಪಾಧೀಕ್ಷಕರು ರಾಯಚೂರು ಮತ್ತು ಶ್ರೀ ವೀರಾರೆಡ್ಡಿ ಹೆಚ್, ಸಿಪಿಐ ಪಶ್ಚಿಮ ವೃತ್ತ ರಾಯಚೂರು ರವರ ಮಾರ್ಗದರ್ಶನದಲ್ಲಿ ಶ್ರೀ ಬಸವರಾಜ ಪಿ.ಎಸ್.ಐ (ಕಾ&ಸು), ಶ್ರೀಮತಿ ಲಕ್ಷ್ಮೀ ಪಿ,ಎಸ್,ಐ (ತನಿಖೆ) ಹಾಗೂ ಸಿಬ್ಬಂದಿಯವರ ವಿಶೇಷ ತಂಡವನ್ನು ರಚಿಸಿ ಠಾಣಾ ಸರಹದ್ದಿನಲ್ಲಿ ಕಳುವಾದ ಸ್ವತ್ತು ಪತ್ತೆ ಕಾಯರ್ಾ ಕೈಗೊಂಡಿದ್ದು, ನೇತಾಜಿ ನಗರ ಪೊಲೀಸ್ ಠಾಣೆಯ ಎಮ್.ಓ.ಬಿ ದಾರನಾದ ನರಸಿಂಹಲು ತಂದೆ ಮಲ್ಲೇಶ ಸಾ|| ಮಡ್ಡಿಪೇಟೆ ಈತನ ಚಲನ ವಲನದ ಮೇಲೆ ನಿಗಾವಹಿಸಿ ಆತನ ಮೇಲೆ ಬಲವಾಗಿ ಸಂಶಯ ಬಂದಿದ್ದರಿಂದ ದಿನಾಂಕ:23-04-2022 ರಂದು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಪಿ.ಎಸ್.ಐ (ಕಾ&ಸು) ಮತ್ತು ಪಿ.ಎಸ್.ಐ (ತನಿಖೆ) ಸಿಬ್ಬಂದಿಯವರೊಂದಿಗೆ ಸಿ.ಪಿ.ಐ ಪಶ್ಚಿಮ ವೃತ್ತ ರವರ ಮುಂದೆ ಹಾಜರು ಪಡಿಸಿದ್ದು, ಎಮ್.ಓ.ಬಿ ನರಸಿಂಹಲು ಈತನಿಗೆ ಪರಿ ಪ್ರಶ್ನಾವಳಿಗಳಿಂದ ವಿಚಾರಣೆಗೊಳಪಡಿಸಿದಾಗ ತನ್ನ ತಪ್ಪು ಒಪ್ಪಿಕೊಂಡು ತಾನು ಕಳುವು ಮಾಡಿದ 60 ಗ್ರಾಂ ಬಂಗಾರದ ಆಭರಣಗಳು, ಅ.ಕಿ. 3 ಲಕ್ಷ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ಒಪ್ಪಿಕೊಂಡು ಪಂಚರ ಸಮಕ್ಷಮದಲ್ಲಿ ಹಾಜರಿ ಪಡಿಸಿದ್ದನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.

     ಈ ಕಾಯರ್ಾಚರಣೆಯಲ್ಲಿ ತನಿಖಾಧಿಕಾರಿ ಶ್ರೀ ವೀರಾರೆಡ್ಡಿ ಹೆಚ್, ಸಿಪಿಐ ಪಶ್ಚಿಮ ವೃತ್ತ ರಾಯಚೂರು ಮತ್ತು ವಿಶೇಷ ತಂಡವಾದ ಶ್ರೀ ಬಸವರಾಜ ಪಿ.ಎಸ್.ಐ (ಕಾ&ಸು) ನೇತಾಜಿ ನಗರ ಠಾಣೆ, ಶ್ರೀ ಲಕ್ಷ್ಮೀ ಪಿ.ಎಸ್.ಐ (ತನಿಖೆ) ನೇತಾಜಿ ನಗರ ಠಾಣೆ ಸಿಬ್ಬಂದಿಯವರಾದ ಗೌಸ್ ಪಾಷ ಹೆಚ್.ಸಿ:141, ಅಶೊಕ ಹೆಚ್.ಸಿ:32, ಶ್ರೀನಿವಾಸ             ಹೆಚ್.ಸಿ:277, ಮಲ್ಲಪ್ಪ ಪಿಸಿ:259, ಅಜೀಜ್ ಪಿಸಿ:462, ರಮೇಶ ಪಿಸಿ:345 ಮತ್ತು ಪಶ್ಚಿಮ ವೃತ್ತದ ತನಿಖಾ ಸಹಾಯಕರಾದ ಎಮ್.ಡಿ ಜಾಫರ್ ಸಾಧಿಖ್ ಹೆಚ್.ಸಿ:48, ಮಲ್ಲಿಕಾಜರ್ುನ ಸಿಪಿಸಿ 242 ಮತ್ತು ಬಸವರಾಜ ಹೆಚ್.ಸಿ.337 ಮತ್ತು ಜೀಪ್ ಚಾಲಕ ರೇಣುಕಾ ರಾಜ್ ಎಪಿಸಿ 213, ನೇತಾಜಿ ನಗರ ಠಾಣೆಯ ತನಿಖಾ ಸಹಾಯಕಾರಾದ ಎಮ್.ರಾಜಶೇಖರ ಹೆಚ್.ಸಿ:47 ಮತ್ತು ಶಕುಂತಲಾದೇವಿ ಮ.ಪಿ.ಸಿ:237 ಹಾಗೂ ಠಾಣೆಯ ಜೀಪ್ ಚಾಲಕ ಮಹಾಂತೇಶ ಪಿಸಿ 79 ರವರುಗಳ ಕಾಯರ್ಾವನ್ನು ಶ್ರೀ ನಿಖಿಲ್.ಬಿ. ಕಖ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಶ್ಲಾಘೀಸಿರುತ್ತಾರೆ

ಇತ್ತೀಚಿನ ನವೀಕರಣ​ : 09-09-2022 07:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಯಚೂರು ಜಿಲ್ಲಾ ಪೊಲೀಸ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080