ಅಭಿಪ್ರಾಯ / ಸಲಹೆಗಳು

ಕೃಷ್ಣಾ ಬ್ರೀಡ್ಜ್ ಮೇಲ್-ಸೇತುವೆ ರಸ್ತೆ ರಿಪೇರಿ ಕಾಮಗಾರಿ ಕೈಗೊಳ್ಳುತ್ತಿದ್ದು ಪರ್ಯಾಯ ರಸ್ತೆ ವ್ಯವಸ್ಥೆ ಬಗ್ಗೆ

ಕಾರ್ಯ ನಿರ್ವಾಹಕ ಅಭಿಯಂತರರು ನ್ಯಾಷನಲ್ ಹೈವೈ ಡಿವಿಜನ್ ಚಿತ್ರದುರ್ಗ ರವರು ದಿನಾಂಕ:18-02-2023 ರಿಂದ  21-02-2023 ರವರೆಗೆ ಕೃಷ್ಣಾ ಬ್ರೀಡ್ಜ್ ಮೇಲ್-ಸೇತುವೆ ರಸ್ತೆ ರಿಪೇರಿ ಕಾಮಗಾರಿ ಕೈಗೊಳ್ಳುತ್ತಿದ್ದು, ಆ ಸಮಯದಲ್ಲಿ ಕೃಷ್ಣಾ ಬ್ರೀಡ್ಜ್ ಮೇಲ್-ಸೇತುವೆ ಮುಖಾಂತರ ಹಾದು ಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗೀತಗೊಳಿಸುವಂತೆ, ಕೋರಿ ಉಲ್ಲೇಖ 01 ರನ್ವಯ ಮಾನ್ಯರವರಲ್ಲಿ ಪತ್ರ ವ್ಯವಹಾರ ಮಾಡಿದ್ದು ಇರುತ್ತದೆ.

         ಶಕ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ಬ್ರೀಡ್ಜ್ ಮೇಲ್-ಸೇತುವೆ ರಸ್ತೆ ರಿಪೇರಿ ಕಾಮಗಾರಿ ಕೈಗೊಳ್ಳುತ್ತಿದ್ದರಿಂದ, ದಿನಾಂಕ:18-02-2023 ರಿಂದ 21-02-2023 ಒಟ್ಟು 4 ದಿನಗಳವರೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 167 ರಲ್ಲಿ ಕೃಷ್ಣಾ ಬ್ರೀಡ್ಜ್ ಮೇಲ್-ಸೇತುವೆ ಮುಂಖಾತರ ಹಾದು ಹೋಗುವ ವಾಹನ ಪಯರ್ಾಯ ರಸ್ತೆ ವ್ಯವಸ್ಥೆಯು ಈ ಕೆಳಗಿನಂತೆ ಇದ್ದು, ಈ ಬಗ್ಗೆ ಪತ್ರಿಕೆ ಪ್ರಕಟಣೆ ಮಾಡಲು ಕೋರಲಾಗಿದೆ.

 

1] ಲಿಂಗಸೂಗೂರು ರಸ್ತೆಯಿಂದ, ಮಕ್ತಾಲ್, ಮಹೆಬೂಬನಗರ, ಹೈದ್ರಾಬಾದ್ ಕಡೆಗೆ ಹೋಗುವ ವಾಹನಗಳು, ಬಸವೇಶ್ವರ

  ಸರ್ಕಲ್, ಗೋಶಾಲ್ ರಸ್ತೆ, ಗಂಜ್ ಸರ್ಕಲ್, ಬಸವನಬಾವಿ ವೃತ್ತ , ಗದ್ವಾಲ್ ರಸ್ತೆ ಮುಖಾಂತರವಾಗಿ ಗದ್ವಾಲ್ ನಿಂದ  ಹೋಗತಕ್ಕದ್ದು.

2] ಯರಗೇರಾ ರಸ್ತೆಯಿಂದ ಮಕ್ತಾಲ್, ಮಹೆಬೂಬನಗರ, ಹೈದ್ರಾಬಾದ್ ಕಡೆಗೆ ಹೋಗುವ ವಾಹನಗಳು, ಬಸವೇಶ್ವರ ಸರ್ಕಲ್, ಗೋಶಾಲ್ ರಸ್ತೆ, ಗಂಜ್ ಸರ್ಕಲ್, ಬಸವನಬಾವಿ ವೃತ್ತ , ಗದ್ವಾಲ್ ರಸ್ತೆ ಮುಖಾಂತರವಾಗಿ ಗದ್ವಾಲ್ ನಿಂದ ಹೋಗತಕ್ಕದ್ದು.

3] ರಾಯಚೂರು ನಗರದಿಂದ ಯಾದಗಿರಿ, ಕಲಬುರಗಿ, ಕಡೆಗೆ ಹೋಗುವ ವಾಹನಗಳು ರಾಯಚೂರು ನಗರದಿಂದ 7ನೇ    ಮೈಲ್ , ಕಲಮಾಲ ಕ್ರಾಸ್, ದೇವದುರ್ಗ, ಹೂವನಹೆಡಗಿ, ಸೇತುವೆ ಮುಖಾಂತರ , ಯಾದಗಿರಿ, ಕಲಬುರಗಿ ಕಡೆಗೆ  ಹೋಗುವುದು.

4] ಹೈದ್ರಾಬಾದ್ ಕಡೆಯಿಂದ ರಾಯಚೂರು ಕಡೆಗೆ ಬರುವ ವಾಹನಗಳು ಮರಿಕಲ್, ಆತ್ಮಕೂರು ಕ್ರಾಸ್, ಉಂಡ್ಯಾಲ,   ಅಮರಚಿಂತ, ಜುರಾಲ್ ಡ್ಯಾಂ, ಗದ್ವಾಲ್ ಮುಂಖಾತರವಾಗಿ ರಾಯಚೂರು ಬರುವುದು.

5] ಮಕ್ತಾಲ್ ಕಡೆಯಿಂದ ಬರುವ ವಾಹನಗಳನ್ನು  ಮಕ್ತಲ್ ದಂಡ್, ರುದ್ರಸಮುದ್ರಂ, ಕೊಂಡದೊಡ್ಡಿ, ಜುರಾಲ್ ಡ್ಯಾಂ,    ಗದ್ವಾಲ್ ಮುಖಾಂತರ ರಾಯಚೂರು ಬರುವುದು.

6] ಯಾದಗಿರಿ, ಕಲಬುರಗಿ ಕಡೆಯಿಂದ ರಾಯಚೂರು ಕಡೆಗೆ ಬರುವ ವಾಹನಗಳು,ಯಾದಗಿರಿ, ಶಹಾಪೂರು,   ಹತ್ತಿಗೂಡೂರು ಕ್ರಾಸ್, ಹೂವಿನಹೆಡಗಿ ಸೇತುವೆ ದೇವದುರ್ಗ ಮುಖಾಂತರವಾಗಿ ರಾಯಚೂರು ನಗರಕ್ಕೆ ಬರುವುದು. 

ಇತ್ತೀಚಿನ ನವೀಕರಣ​ : 22-02-2023 12:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಯಚೂರು ಜಿಲ್ಲಾ ಪೊಲೀಸ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080