ಅಭಿಪ್ರಾಯ / ಸಲಹೆಗಳು

ಶ್ರೀ ಶ್ರವಣ ಜೈನ್ ತಂದೆ ಪದಮ್ಜೈನ್, ವಯಃ 22 ವರ್ಷ, ಜಾತಿಃ ಜೈನ್, ಉದ್ಯೋಗ ಬಂಗಾರದ ವ್ಯಾಪಾರ, ಸಾಃ ರಾಮಲಿಂಗೇಶ್ವರ ಕಾಲೋನಿ, ಮುದಗಲ್, ತಾಃ ಲಿಂಗಸ್ಗೂರು ರವರು ದಿನಾಂಕಃ-19.10.2022 ರಂದು ಮುದಗಲ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಂಶವೇನಂದರೆ,  ತಾನು ಬಂಗಾರದ ಚೀಲವನ್ನು ತೆಗೆದುಕೊಂಡು, ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ರಾಮಲಿಂಗೇಶ್ವರ ಕಾಲೋನಿಯ ಕಮಾನ ಹತ್ತಿರ ರಾತ್ರಿ 7.35 ಗಂಟೆಯ ಸುಮಾರಿಗೆ ಯಾರೋ ಅಪರಿಚಿತರು ಬಂದು ಕಾರದ ಪುಡಿಯನ್ನು ಕಣ್ಣಿಗೆ ಹುಗ್ಗಿ, ಕೈಯಲ್ಲಿದ್ದ ಸುಮಾರು 300 ಗ್ರಾಂ ತೂಕವುಳ್ಳ ಸುಮಾರು 13,00,000/- ಬೆಲೆ ಬಾಳುವ ಬಂಗಾರದ ಅಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಬಗ್ಗೆ ದೂರು ನೀಡಿದ್ದರ ಮೇಲಿಂದ ಮುದಗಲ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 157/2022 ಕಲಂ. 392 ಐಪಿಸಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

                ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡುವ ಕುರಿತು ಶ್ರೀ ನಿಖಿಲ್.ಬಿ.ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು, ಶ್ರೀ ಆರ್.ಶಿವುಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ರಾಯಚೂರು ಮತ್ತು ಶ್ರೀ ಮಂಜುನಾಥ ಡಿ.ಎಸ್.ಪಿ ಲಿಂಗಸ್ಗೂರು ರವರ ಮಾರ್ಗದರ್ಶನದಲ್ಲಿ ಶ್ರೀ ಸಂಜೀವ.ಎಸ್.ಬಳೆಗಾರ, ಸಿಪಿಐ ಮಸ್ಕಿ ವೃತ್ತ ರವರ ನೇತೃತ್ವದಲ್ಲಿ ಶ್ರೀ ಪ್ರಕಾಶರಡ್ಡಿ ಡಂಬಳ ಪಿ.ಎಸ್.ಐ ಮುದಗಲ್, ಶ್ರೀ ಛತ್ರಪ್ಪ ಪಿ.ಎಸ್.ಐ-2, ಮತ್ತು ಮುದಗಲ್ಲ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಅಮರೇಶ ಹೆಚ್.ಸಿ-99, ಶಿವನಗೌಡ ಹೆಚ್.ಸಿ-24, ಶರಣರೆಡ್ಡಿ ಪಿಸಿ-678, ದೇವರಡ್ಡಿ ಪಿಸಿ-552, ಪಂಪಾಪತಿ ಪಿಸಿ-50, ಹನುಮಂತ ಪಿಸಿ-01, ಅಡಿವೆಪ್ಪ ಪಿಸಿ-140, ಅಮರೇಶ ಪಿಸಿ-139, ಚಂದ್ರಶೇಖರ ರೆಡ್ಡಿ ಪಿಸಿ-189, ಅಜೀಮ್ಪಾಷ ಎ.ಹೆಚ್.ಸಿ, ಹನುಮಂತ ಎಪಿಸಿ-132, ಹಾಗೂ ಮುದಗಲ್ ಠಾಣೆಯ ಇತರೆ ಸಿಬ್ಬಂದಿರವರನ್ನೊಳಗೊಂಡ ವಿಶೇಷ ತಂಡವನ್ನು ರಚಸಿದ್ದು ಇರುತ್ತದೆ.

                ಸದರಿ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವೈಜ್ಞಾನಿಕ  ವಿಧಾನಗಳ ಮೂಲಕ ತನಿಖೆ ನಡೆಸಿ ಆರೋಪಿತರನ್ನು ಪತ್ತೆ ಮಾಡಿ ಆರೋಪಿತರಾದ ಎ-1, ದಾದಪೀರ @ ದದ್ದು ತಂದೆ ಮೌಲಸಾಬ ವಾಳಿ, ವಯಃ 20 ವರ್ಷ, ಸಾಃ ಮಟ್ಟೂರು ತಾಂಡಾ, ಹಾಃವಃ ಹಳೇಪೇಟೆ, ಮುದಗಲ್, ಎ-2, ಗೋಕಲಸಾಬ@ಗೌಸ್ ತಂದೆ ಶಾಮೀದ್ಸಾಬ ನಂದಿಹಾಳ, ವಯಃ 24 ವರ್ಷ, ಸಾಃ ಹಳೇಪೇಟೆ, ಮುದಗಲ್. ಎ-3,ಸಾಬೀರಬೇಗ್ ತಂದೆ ಎಕ್ಬಾಲಬೇಗ್, ವಯಃ 23 ವರ್ಷ, ಸಾಃಜನತಾ ಕಾಲೋನಿ, ಮುದಗಲ್, ತಾಃ ಲಿಂಗಸ್ಗೂರು ಇವರನ್ನು ದಸ್ತಗಿರಿ ಮಾಡಿ, ಸದರಿ ಆರೋಪಿತರಿಂದ 256.065 ಗ್ರಾಂ ಅಂದಾಜು ಕಿಮ್ಮತ್ತು 12,50,000/-(ಹನ್ನೆರಡುವರೆ ಲಕ್ಷ) ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಮತ್ತು ಕಳ್ಳತನಕ್ಕೆ ಉಪಯೋಗಿಸಿದ ಬಿಳಿ ಬಣ್ಣದ ಸ್ಕೂಟಿ ಅಂದಾಜು ಕಿಮ್ಮತ್ತು 50,000/- ರೂಪಾಯಿನೇದ್ದನ್ನು ದಿನಾಂಕಃ-06/12/2022 ಮತ್ತು 07/12/2022 ರಂದು ಜಪ್ತು ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕೊಪ್ಪಿಸಿರುತ್ತಾರೆ. ಪ್ರಮುಖ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿದ ಸಿಪಿಐ ಮಸ್ಕಿ, ಪಿ.ಎಸ್.ಐ ಮುದಗಲ್ ಹಾಗೂ ಮುದಗಲ್ ಠಾಣೆಯ ಸಿಬ್ಬಂದಿಯವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರು ಶ್ಲಾಘಿಸಿ, ಬಹುಮಾನವನ್ನು ಘೋಷಿಸಿರುತ್ತಾರೆ

ಇತ್ತೀಚಿನ ನವೀಕರಣ​ : 10-12-2022 12:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಯಚೂರು ಜಿಲ್ಲಾ ಪೊಲೀಸ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080