ಅಭಿಪ್ರಾಯ / ಸಲಹೆಗಳು

                ದಿನಾಂಕ 17.02.2023 ರಂದು ಹಟ್ಟಿ ಪೋಲೀಸ್ ಠಾಣಾ ವ್ಯಾಪ್ತಿಯ ಗೆಜ್ಜಲಗಟ್ಟಾ ಗ್ರಾಮದ ಟಾಗೋರ್ ಸ್ಮಾರಕ ಪ್ರೌಢಶಾಲೆಯಲ್ಲಿ ಮಾನ್ಯ ಎಸ್ ಪಿ ಸಾಹೇಬರು ರಾಯಚೂರು ರವರ ನೇತೃತ್ವದಲ್ಲಿ 'ಯುವಕರ ಸಭೆ' ಯನ್ನು   ಹಮ್ಮಿಕೊಳ್ಳಲಾಗಿತ್ತು. ಈ  ಕಾರ್ಯಕ್ರಮದಲ್ಲಿ ಹಟ್ಟಿ ಪೋಲೀಸ್ ಠಾಣೆಯ ವ್ಯಾಪ್ತಿಯ ಬೇರೆ ಬೇರೆ ಗ್ರಾಮಗಳಿಂದ ಸುಮಾರು 300 ಕ್ಕು ಹೆಚ್ಚು ಯುವಕರು ಭಾಗವಹಿಸಿದರು. ಮಾನ್ಯ ಎಸ್ ಪಿ ಸಾಹೇಬರು ಯುವಕರನ್ನು ಉದ್ದೇಶಿಸಿ ಕಾನೂನಿನ ಬಗ್ಗೆ ಹಾಗೂ ಜನಸ್ನೇಹಿ ಪೊಲೀಸ್ ಬಗ್ಗೆ 112 ಕರೆಯ ಬಗ್ಗೆ ಸವಿಸ್ತಾರವಾಗಿ  ಮಾತನಾಡಿದರು. ನಂತರ ಯುವಕರೊಂದಿಗೆ  ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಕೇಳಿದ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರಿಸಿದರು ಹಾಗೂ ಶಾಲೆಯ ಮಕ್ಕಳ ಜೊತೆಗೆ ಕುಳಿತು ಮದ್ಯಾಹ್ನದ ಬಿಸಿಯೂಟವನ್ನು ಸವಿದರು. ನಂತರ ನಿಲೋಗಲ್ ಗ್ರಾಮದ ಯುವಕರು ಹಮ್ಮಿಕೊಂಡ ನಿಲೋಗಲ್ ಪ್ರೀಮಿಯರ್ ಲೀಗ್ ನಲ್ಲಿ  ಟಾಸ್ ಮಾಡಿ  ಕ್ರಿಕೇಟ್ ಉದ್ಘಾಟನೆ ಮಾಡಿ  ಯುವಕರಲ್ಲಿ ಚೈತನ್ಯ ತುಂಬಿದರು. ಈ ಸಭೆಗೆ ಹಟ್ಟಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಟ್ಯಾಗೂರ್ ಸ್ಮಾರಕ ಪ್ರೌಢಶಾಲೆಯ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಸಭೆಯನ್ನು ಯಶಸ್ವಿ ಗೊಳಿಸಿದರು.

ಇತ್ತೀಚಿನ ನವೀಕರಣ​ : 18-02-2023 12:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಯಚೂರು ಜಿಲ್ಲಾ ಪೊಲೀಸ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080