ಅಭಿಪ್ರಾಯ / ಸಲಹೆಗಳು

ದಿನಾಂಕ: 18.08.2022 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಸಿಂಧನೂರು ನಗರದ ಕನಕದಾಸ ವೃತ್ತದ ಹತ್ತಿರದಲ್ಲಿ ರಾಯಚೂರು ನಗರದ ಗಣೇಶ ಬೀಡಿ ಕಂಪನಿಯ ವಾಹನದ ಚಾಲಕ ಮತ್ತು ಸೇಲ್ಸ್ಮೆನ್ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಂಪನಿ ಬೀಡಿಗಳನ್ನು ಮಾರಾಟ ಮಾಡಿ ಸಂಗ್ರಹಿಸಿದ 46,23,360/- ರೂ.ಗಳನ್ನು ಟಾಟಾ ಟಬರ್ೋ ಕಂಟೇನರ್ ವಾಹನ ಸಂ. ಕೆಎ363107 ದಲ್ಲಿ ಇಟ್ಟು, ಊಟಕ್ಕೆ ಹೋಗಿ ಮರಳಿ ಬರುವಷ್ಟರಲ್ಲಿ ಯಾರೋ ಕಳ್ಳರು ವಾಹನದಲ್ಲಿದ್ದ ನಗದು ಹಣ 46,23,360/- ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಗಣೇಶ ಬೀಡಿ ಕಂಪನಿ ಮಾಲೀಕರು ಸಿಂಧನೂರು ನಗರ ಠಾಣೆಯಲ್ಲಿ ಸಲ್ಲಿಸಿದ ದೂರಿನ ಅನ್ವಯ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 130/2022 ಕಲಂ 379 ಐಪಿಸಿ ರೀತ್ಯಾ ದೂರು ದಾಖಲಾಗಿತ್ತು.

               ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡುವ ಕುರಿತು ಶ್ರೀ ನಿಖಿಲ್ ಬಿ. ಐಪಿಎಸ್., ಎಸ್.ಪಿ. ರಾಯಚೂರು ರವರು, ಶ್ರೀ ಆರ್. ಶಿವಕುಮಾರ, ಹೆಚ್ಚುವರಿ ಎಸ್.ಪಿ, ರಾಯಚೂರು ಮತ್ತು ಶ್ರೀ ವೆಂಕಟಪ್ಪ ನಾಯಕ, ಡಿಎಸ್ಪಿ, ಸಿಂಧನೂರು ರವರ ಮಾರ್ಗದರ್ಶನದಲ್ಲಿ ಶ್ರೀ ರವಿಕುಮಾರ ಎಸ್. ಕಪ್ಪತ್ತನವರ, ಸಿ.ಪಿ.ಐ, ಸಿಂಧನೂರು ರವರ ನೇತೃತ್ವದಲ್ಲಿ ಶ್ರೀಮತಿ ಸೌಮ್ಯ, ಪಿ.ಎಸ್.ಐ(ಕಾಸು), ಸಿಂಧನೂರು ನಗರ ಠಾಣೆ, ಶ್ರೀ ಎರಿಯಪ್ಪ, ಪಿ.ಎಸ್.ಐ, ಸಿಂಧನೂರು ಗ್ರಾಮೀಣ ಠಾಣೆ, ಶ್ರೀ ಬೆಟ್ಟಯ್ಯ, ಪಿ.ಎಸ್.ಐ(ತನಿಖೆ), ಸಿಂಧನೂರು ನಗರ ಠಾಣೆ ರವರನ್ನು ಮತ್ತು ಸಿಬ್ಬಂದಿಯವರಾದ ಸಂಗಮೇಶ ಎಪಿಸಿ-167,  ಆದಯ್ಯ ಪಿಸಿ-67, ಅನಿಲಕುಮಾರ ಪಿಸಿ-447, ದ್ಯಾಮಣ್ಣ ಪಿಸಿ-396, ಗೋಪಾಲ ಪಿಸಿ-679, ಶಿವಲಿಂಗಪ್ಪ ಹೆಚ್.ಸಿ-167, ಪ್ರಕಾಶ ಪಿಸಿ-413, ವಾಹನ ಚಾಲಕರಾದ ಸುರೇಶ್ ಸಿಪಿಸಿ-314, ಅಮರೇಶ ಹೆಚ್.ಸಿ-364, ತಾಂತ್ರಿಕ ಸಹಾಯಕ ಅಜೀಮ್ ಪಾಷಾ, ಎಎಚ್ಸಿ ರವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದು ಇರುತ್ತದೆ.

              ಸದರಿ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಿಂಚಿನ ಕಾಯರ್ಾಚರಣೆ ನಡೆಸಿ ಹಣ ಇರಿಸಿದ್ದ ವಾಹನದ ಚಾಲಕ 1) ಸೈಯ್ಯದ್ ಜುಬೇರ ತಂದೆ ಸೈಯ್ಯದ್ ದಾದಾ, 24ವರ್ಷ, ಸದರಿ ಚಾಲಕನ ಸಹೋದರ 2) ಸೈಯ್ಯದ್ ಖಲಂದರ್ ತಂದೆ ಸೈಯ್ಯದ್ ದಾದಾ, 21ವರ್ಷ, ಹಾಗೂ ಚಾಲಕನ ಸ್ನೇಹಿತ 3) ಗಣೇಶ ತಂದೆ ನಾಗೇಶ ಪೆದ್ದಪಳ್ಳಿ, 20ವರ್ಷ, ಎಲ್ಲರೂ ಸಾ: ರಾಯಚೂರು ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಕಳ್ಳತನವಾದ 46,23,360/- ರೂ.ಗಳನ್ನು (ನಲ್ವಾತ್ತಾರು ಲಕ್ಷದ ಇಪ್ಪತ್ತು ಮೂರು ಸಾವಿರದ ಮೂರು ನೂರು ಅರವತ್ತು ರೂಪಾಯಿಗಳು) ಮತ್ತು ಕಳ್ಳತನ ಮಾಡಲು ಬಳಸಿದ ಹೊಂಡಾ ಶೈನ್ ಮೋಟಾರ್ ಸೈಕಲ್ನೇದ್ದನ್ನು ಜಫ್ತಿ ಮಾಡಿಕೊಂಡಿದ್ದು ಇರುತ್ತದೆ. ಆರೋಪಿತರು ವಿಚಾರಣೆ ಕಾಲಕ್ಕೆ ಕಳ್ಳತನ ಮಾಡಿದ ಬಗ್ಗೆ ತಪ್ಪೋಪ್ಪಿಕೊಂಡಿರುತ್ತಾರೆ, ಸದ್ಯ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇತ್ತೀಚಿನ ನವೀಕರಣ​ : 09-09-2022 07:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಯಚೂರು ಜಿಲ್ಲಾ ಪೊಲೀಸ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080